ನಾವು ಏನು ಮಾಡುತ್ತೇವೆ

  • ದಕ್ಷಿಣ ಭಾರತದಲ್ಲಿನ ತಳಮಟ್ಟದ ಎನ್‏ಜಿಓಗಳು ಮತ್ತು ಸ್ಥಳೀಯ ಸಮುದಾಯಗಳಿಗೆ, ಅವರ ನೆರೆಹೊರೆಯಲ್ಲಿ ಕಲ್ಲಿದ್ದಲು-ಆಧಾರಿತ ಸ್ಥಾವರಗಳ ಸ್ಥಾಪನೆಗಳಿಗೆ ಸಂಬಂಧಪಟ್ಟ ಘೋಷಣೆಗಳ ಕುರಿತು ಮಾಹಿತಿ ನೀಡುತ್ತೇವೆ ಹಾಗು ಸ್ಥಾವರದ ಈಐಎ-ಸಂಬಂಧಿತ ಕಾಗದಪತ್ರಗಳನ್ನು ಕೋರಿಕೆ ಮೇರೆಗೆ ಅವರೊಂದಿಗೆ ಹಂಚಿಕೊಳ್ಳುತ್ತೇವೆ
  • ತಾಂತ್ರಿಕ ತಜ್ಞ, ಪರಿಸರ ವಕೀಲ ಮತ್ತು ಆರ್ಥಿಕ ತಜ್ಞರನ್ನು ಒಳಗೊಂಡ ತಜ್ಞರ ತಂಡವನ್ನು ಬಳಸಿಕೊಂಡು, ಪರಿಸರೀಯ ಪರಿಣಾಮ ನಿರ್ಧರಿಸುವಿಕೆ ಮತ್ತು ಸ್ಥಾವರದ ತೀವ್ರ ಪರಿಣಾಮಗಳನ್ನು ತಗ್ಗಿಸಲು ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಮೇಲೆ ತಾಂತ್ರಿಕ ಮೌಲ್ಯಮಾಪನ ನಡೆಸುತ್ತೇವೆ. ಇದರ ವರದಿಯನ್ನು ತಳಮಟ್ಟದ ಎನ್‏ಜಿಓಗಳು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಹಂಚಿಕೊಳ್ಳುತ್ತೇವೆ. ಅವರು ಈ ಉದ್ದೇಶಿತ/ಈಗಾಗಲೆ ಇರುವ ಸ್ಥಾವರದ ವಿರುದ್ಧ ಹೋರಾಡಲು ಈ ವರದಿಯ ಅಂಶಗಳನ್ನು ಬಳಸಿಕೊಳ್ಳಬಹುದಾಗಿದೆ.
  • ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಮಾಹಿತಿ ಪುಸ್ತಿಕೆಗಲು ಮತ್ತು ಪೋಸ್ಟರ್ ಗಳನ್ನು ಹಂಚುವ ಮೂಲಕ ಈಐಎ ಪ್ರಕ್ರಿಯೆ ಕುರಿತು ಎನ್‏ಜಿಓಗಳು ಮತ್ತು ಸ್ಥಳೀಯ ಸಮುದಾಯಗಳಲ್ಲಿ ಜಾಗೃತಿ ಮೂಡಿಸುತ್ತೇವೆ
  • ಈಐಎ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲಿ ಅವರು ಅಳವಡಿಸಿಕೊಳ್ಳಲು ಸಾಧ್ಯವಾಗಬಹುದಾದ ಮಧ್ಯಸ್ಥಿಕೆಯ ಕಾರ್ಯತಂತ್ರಗಳ ಕುರಿತು, ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಹಾನಿಗೊಳಗಾದವರನ್ನು/ ಹಾನಿಗೊಳಗಾಗಬಹುದಾದ ಸಂಭಾವ್ಯ ಎನ್‏ಜಿಓಗಳು ಮತ್ತು ವ್ಯಕ್ತಿಗಳನ್ನು ಸಜ್ಜುಗೊಳಿಸುತ್ತೇವೆ.
  • ದಕ್ಷಿಣ ಭಾರತದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಅಭಿವೃದ್ಧಿ ಮತ್ತು ಬೆಳವಣಿಗೆಗಳ ಕುರಿತು ಪ್ರತಿ ತಿಂಗಳು ಈ- ನ್ಯೂಸ್‏ಲೆಟರ್ ಪ್ರಕಟಿಸುತ್ತೇವೆ. ಇದು ಪರಿಸರ ಮತ್ತು ಗ್ರಾಹಕ ಸಮೂಹಗಳು, ಗ್ರಾಮ ಪ್ರತಿನಿಧಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಸೇರಿದಂತೆ 1000ಕ್ಕೂ ಹೆಚ್ಚು ಚಂದಾದಾರರನ್ನು ತಲುಪುತ್ತದೆ.